ಪ್ರಕಟಣೆ


Instructions

1) ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಮಾಹಿತಿಯನ್ನು ಜಾಗರೂಕತೆಯಿಂದ ಓದಿ ಭರ್ತಿ ಮಾಡತಕ್ಕದ್ದು.
2) ಅವಶ್ಯಕತೆಯಿರುವ ಮಾಹಿತಿಯನ್ನು ನೀಡತಕ್ಕದ್ದು.
3) ನಿಗದಿತ ಶುಲ್ಕವನ್ನು ಪಾವತಿಸದೆ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
4) ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿಯನ್ನು 2 ಪ್ರತಿ ಪ್ರಿಂಟ್ ತೆಗೆದುಕೊಂಡು ಅರ್ಜಿದಾರರು ದಾಖಲಾತಿಗಳ ಜೊತೆಯಲ್ಲಿ ಬ್ಯಾಂಕ್ ಡಿಡಿ/ರಶೀದಿ ಅರ್ಜಿಯೊಂದಿಗೆ ದಾಖಲಿಸಿ ಸಂಘದ ಕೇಂದ್ರ ಕಛೇರಿಯ ವಿಳಾಸಕ್ಕೆ ಅಂಚೆ /ಖುದ್ದಾಗಿ /ಕೋರಿಯರ್ ಮೂಲಕ ದಿನಾಂಕ 10/09/2018 ರ ಸಂಜೆ 5 ಗಂಟೆಯೊಳಗೆ ಕಳುಯಿಸತಕ್ಕದ್ದು
5)ಅರ್ಜಿಯನ್ನು ಸಲ್ಲಿಸುವ ಮೊದಲು, ಬ್ಯಾಂಕ್ ಅಥವಾ ಸಂಘದಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ ನಂತರ ಅರ್ಜಿಯನ್ನು ಭರ್ತಿ ಮಾಡಬೇಕು ಇಲ್ಲದಿದ್ದರೆ ಅಪ್ಲಿಕೇಶನ್ ಅರ್ಜಿ ಪೂರ್ಣಗೊಳಿಸಲು ಯಾವುದೇ ಅವಕಾಶವಿಲ್ಲ
6) ಅರ್ಜಿದಾರರು ಒಮ್ಮೆ ಪಾವತಿ ಮಾಡಿದ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರು ಪಾವತಿ ಮಾಡಲಾಗುವುದಿಲ್ಲ
7) ಕಛೇರಿಗೆ ತಲುಪಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು
8) ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮೊದಲು ಬ್ಯಾಂಕ್ ಅಥವಾ ಸಂಘದಲ್ಲಿ ಹಣವನ್ನು ಪಾವತಿ ಮಾಡಿ ಅರ್ಜಿಯನ್ನು ಭರ್ತಿ ಮಾಡತಕ್ಕದು.

-:REQUIRED DOCUMENTS:-

* ALL EDUCATIONAL CERTIFICATES

* CASTE AND INCOME CERTIFICATES

* ALL KYC(Aaddar Card, Voter ID)

* DD / RECIPTS


ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ನಿ., ಚನ್ನಗಿರಿ. ಈ ಸಂಸ್ಥೆಯಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛೆಯುಳ್ಳ ಅಭ್ಯರ್ಥಿಗಳು ಸಂಘಕ್ಕೆ ಖುದ್ದಾಗಿ/ಅಂಚೆ/ಕೋರಿಯರ್ ಮೂಲಕ ಕಳುಹಿಸಲು ಅವಕಾಶವಿರುತ್ತದೆ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 10.09.2018 ರ ಸಂಜೆ 5-00 ಗಂಟೆಯವರೆಗೆ ಇರುತ್ತದೆ. ಪ್ರಕಟಣೆ ಮತ್ತು ಅರ್ಜಿಯನ್ನು ಸಂಘದ ಅಧಿಕೃತ ವೆಬ್‍ಸೈಟ್ www.tumcos.com ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು. ನೇಮಕಾತಿ ಮಾಡಲು ಉದ್ದೇಶಿಸಿರುವ 25 ವಿವಿಧ ಹುದ್ದೆಗಳ ವಿವರ ಈ ಕೆಳಕಂಡಂತಿದೆ.


ಕ್ರ. ಸಂ. ಹುದ್ದೆಯ ಹೆಸರು ಒಟ್ಟು ಹುದ್ದೆಗಳು
01 ಆಂತರಿಕ ಲೆಕ್ಕ ಪರಿಶೋಧಕರು 03
02 ದ್ವಿತೀಯ ದರ್ಜೆ ಸಹಾಯಕರು 20
03 ಸಿವಿಲ್ ಇಂಜಿನಿಯರ್ 01
04 ಸೆಕ್ಯುರಿಟಿ ಮ್ಯಾನೇಜರ್ 01

ವೇತನ ಶ್ರೇಣಿ:

1)   ಆಂತರಿಕ ಲೆಕ್ಕ ಪರಿಶೋಧಕರು :- ರೂ. 37900-950-39800-1100-46400-1250-53900-1450-62600-1650-70850.
2)  ದ್ವಿತೀಯ ದರ್ಜೆ ಸಹಾಯಕರು :- ರೂ. 23500-550-24600-600-27000-650-29600-750-32600-850-36000-950-39800-1100-46400-1250-47650
3)   ಸಿವಿಲ್ ಇಂಜಿನಿಯರ್ :- ರೂ. 25800-600-27000-650-29600-750-32600-850-36000-950-39800-1100-46400-1250-51400.
4)   ಸೆಕ್ಯುರಿಟಿ ಮ್ಯಾನೇಜರ್ :- ರೂ. 23500-550-24600-600-27000-650-29600-750-32600-850-36000-950-39800-1100-46400-1250-47650


ವಿದ್ಯಾರ್ಹತೆ :

ಆಂತರಿಕ ಲೆಕ್ಕ ಪರಿಶೋಧಕರು :

1)   ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಬಿಕಾಂ/ಬಿಬಿಎಂ/ಬಿಸಿಎ/ಬಿಎಸ್ಸಿ [ಕಲಾ ವಿಭಾಗವನ್ನು [ಬಿಎ] ಹೊರತುಪಡಿಸಿ] ಪದವಿ ಪರೀಕ್ಷೆಯಲ್ಲಿ ಸಾಮಾನ್ಯ/ಹಿಂದುಳಿದವರ್ಗ ಅಭ್ಯರ್ಥಿಗಳು ಶೇ 65 ಅಂಕಗಳನ್ನು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಮಾಜಿ ಸೈನಿಕರು ಶೇ 60 ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು. ಹಾಗೂ ಎಂ.ಕಾಂ/ಎಂಬಿಎ/ಎಂಸಿಎ/ಎಂಎಸ್ಸಿ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಆಡಿಟ್ ಮತ್ತು ಅಕೌಂಟ್ಸ್ ವಿಭಾಗದಲ್ಲಿ ಕನಿಷ್ಠ 6 ವರ್ಷದ ಅನುಭವ ಹೊಂದಿರಬೇಕು. ಅನುಭವ ಹೊಂದಿದ ಬಗ್ಗೆ ತಾನು ಕೆಲಸ ನಿರ್ವಹಿಸಿದ ಸಕ್ಷಮ ಸಂಸ್ಥೆಯಿಂದ ಧೃಢೀಕರಣ ಪತ್ರ ಪಡೆದು ಅರ್ಜಿಗೆ ಲಗತ್ತಿಸತಕ್ಕದ್ದು.
2)    ಅಭ್ಯರ್ಥಿಗಳಿಗೆ ಕನ್ನಡ, ಇಂಗ್ಲೀಷ್ ಭಾಷಾ ಪರಿಜ್ಞಾನ ಹಾಗೂ ಕಂಪ್ಯೂಟರ್ ನಿರ್ವಹಣೆ ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ.

ದ್ವಿತೀಯ ದರ್ಜೆ ಸಹಾಯಕರು

1)   ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವಿ [ಕಲಾ ವಿಭಾಗವನ್ನು [ಬಿಎ] ಹೊರತುಪಡಿಸಿ] ಪರೀಕ್ಷೆಯಲ್ಲಿ ಸಾಮಾನ್ಯ, ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕನಿಷ್ಠ ಶೇ 65 ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು. ಆದರೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ/ಪ್ರವರ್ಗ-1/ಮಾಜಿ ಸೈನಿಕ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕನಿಷ್ಠ ಶೇ 60 ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.
2)  ಅಭ್ಯರ್ಥಿಗಳಿಗೆ ಕನ್ನಡ, ಇಂಗ್ಲೀಷ್ ಭಾಷಾ ಪರಿಜ್ಞಾನ ಹಾಗೂ ಕಂಪ್ಯೂಟರ್ ನಿರ್ವಹಣೆ ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ.

ಸಿವಿಲ್ ಇಂಜಿನಿಯರ್:

1)  ಹುದ್ದೆಗೆ ಅರ್ಜಿ ಸಲ್ಲಿಸಲು ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್ ಅಥವಾ ಬಿಇ ಇನ್ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಇದಲ್ಲದೆ ಕಟ್ಟಡಗಳ ನಿರ್ಮಾಣ ಹಾಗೂ ನಿರ್ವಹಣೆ ವಿಭಾಗದಲ್ಲಿ ಕನಿಷ್ಟ 3 ವರ್ಷಗಳ ಅನುಭವ ಹೊಂದಿರಬೇಕು. ಅನುಭವ ಹೊಂದಿದ ಬಗ್ಗೆ ತಾನು ಕೆಲಸ ನಿರ್ವಹಿಸಿದ ಸಕ್ಷಮ ಸಂಸ್ಥೆಯಿಂದ ಧೃಢೀಕರಣ ಪತ್ರ ಪಡೆದು ಅರ್ಜಿಗೆ ಲಗತ್ತಿಸತಕ್ಕದ್ದು.
2)   ಅಭ್ಯರ್ಥಿಗಳಿಗೆ ಕನ್ನಡ, ಇಂಗ್ಲೀಷ್ ಭಾಷಾ ಪರಿಜ್ಞಾನ ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ. ಕಂಪ್ಯೂಟರ್ ನಿರ್ವಹಣೆ ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ.

ಸೆಕ್ಯುರಿಟಿ ಮ್ಯಾನೇಜರ್ :

1)   ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಪದವಿ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅಥವಾ ಸೇನೆಯಲ್ಲಿ 10 ವರ್ಷ ಸೇವೆ ಸಲ್ಲಿಸಿರಬೇಕು. ಮಾಜಿ ಸೈನಿಕರಿಗೆ ಪ್ರಥಮ ಆಧ್ಯತೆ.
2)  ಅಭ್ಯರ್ಥಿಗಳಿಗೆ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಮತ್ತು ಅನುಭವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷಾ ಪರಿಜ್ಞಾನ ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ.


ವಯೋಮಿತಿ :

ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಈ ಕೆಳಗಿನಂತೆ ವಯೋಮಿತಿಯನ್ನು ಹೊಂದಿರಬೇಕು ಹಾಗೂ ನಿಗದಿತ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು.


ವರ್ಗೀಕರಣ ವಿವರ ಕನಿಷ್ಟ ಗರಿಷ್ಟ
ಸಾಮಾನ್ಯ ವರ್ಗ 18 35
ಇತರೆ ಹಿಂದುಳಿದ ವರ್ಗ 18 38
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ/ ಪ್ರವರ್ಗ-1 18 40

ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳಿಗೆ ಅವರು ಸಲ್ಲಿಸಿದ ಸೇವಾ ಅವಧಿಯೊಂದಿಗೆ 3 ವರ್ಷಗಳ ಹೆಚ್ಚುವರಿ ಅವಧಿ ಸೇರಿಸಿ ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗುವುದು.


ಆಯ್ಕೆ ವಿಧಾನ :

ಆಂತರಿಕ ಲೆಕ್ಕ ಪರಿಶೋಧಕರು/ ದ್ವಿತೀಯ ದರ್ಜೆ ಸಹಾಯಕರು:

ಸಂಘಕ್ಕೆ ಬರುವ ಒಟ್ಟು ಅರ್ಜಿಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ 1:3 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಅಂಕಗಳು 15. ಲಿಖಿತ ಪರೀಕ್ಷೆಯಲ್ಲಿ ಪಡೆದ ಸರಾಸರಿ ಅಂಕಗಳನ್ನು ಶೇ.85% ಕ್ಕೆ ಇಳಿಸಿ, ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಕೂಡಿಸಿ ಅರ್ಹತಾ ಪಟ್ಟಿಯನ್ನು ತಯಾರಿಸಿ (MERIT LIST) ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.ಸಿವಿಲ್ ಇಂಜಿನಿಯರ್:

ಸಂಘಕ್ಕೆ ಬರುವ ಒಟ್ಟು ಅರ್ಜಿಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳಿಗೆ ಲಿಖಿತ/ತಾಂತ್ರಿಕ ಪರೀಕ್ಷೆ ನಡೆಸಲಾಗುವುದು. ಲಿಖಿತ/ತಾಂತ್ರಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ 1:3ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಅಂಕಗಳು 15. ಲಿಖಿತ ತಾಂತ್ರಿಕ ಪರೀಕ್ಷೆಯಲ್ಲಿ ಪಡೆದ ಸರಾಸರಿ ಅಂಕಗಳನ್ನು ಶೇ.85% ಕ್ಕೆ ಇಳಿಸಿ, ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಕೂಡಿಸಿ ಅರ್ಹತಾ ಪಟ್ಟಿಯನ್ನು ತಯಾರಿಸಿ (MERIT LIST) ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.ಸೆಕ್ಯುರಿಟಿ ಮ್ಯಾನೇಜರ್ :

ಸಂಘಕ್ಕೆ ಬರುವ ಒಟ್ಟು ಅರ್ಜಿಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ 1:3 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಅಂಕಗಳು 15. ಲಿಖಿತ ಪರೀಕ್ಷೆಯಲ್ಲಿ ಪಡೆದ ಸರಾಸರಿ ಅಂಕಗಳನ್ನು ಶೇ.85% ಕ್ಕೆ ಇಳಿಸಿ, ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಕೂಡಿಸಿ ಅರ್ಹತಾ ಪಟ್ಟಿಯನ್ನು ತಯಾರಿಸಿ (MERIT LIST) ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.


ಅರ್ಜಿ ಶುಲ್ಕ:

ಸಾಮಾನ್ಯ / ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ರೂ.2000/-ಗಳನ್ನು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಪ್ರವರ್ಗ-1/ಮಾಜಿ ಸೈನಿಕ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ರೂ.1000/-ಗಳ ಅರ್ಜಿ ಶುಲ್ಕವನ್ನು ಪಾವತಿಸತಕ್ಕದ್ದು. ಅರ್ಜಿ ಶುಲ್ಕ ಪಾವತಿಸುವುದಕ್ಕೆ ಈ ಕೆಳಕಂಡ ವಿಧಾನಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬಹುದು.

1] ನಮ್ಮ ಸಂಸ್ಥೆಯ ವ್ಯವಹಾರದ ವೇಳೆಯಲ್ಲಿ ನಗದು ಮೂಲಕ ಅಥವಾ ಡಿಡಿ ಮೂಲಕ ಮೇ|| ತುಮ್‍ಕೋಸ್ ಲಿ., ಚನ್ನಗಿರಿ
[M/S TUMCOS LTD CHANNAGIRI AND PAYABLE AT CHANNAGIRI] ಇದರ ವಿಳಾಸಕ್ಕೆ ಚನ್ನಗಿರಿಯಲ್ಲಿ ಪಾವತಿಯಾಗುವಂತೆ ನಿಗಪಡಿಸಿದ ಅಂತಿಮ ದಿನಾಂಕ 10.09.2018 ರ ಸಂಜೆ 5-00 ಘಂಟೆಯ ಒಳಗಾಗಿ ಪಾವತಿಸಬಹುದಾಗಿದೆ ಅರ್ಜಿ ಶುಲ್ಕ ಪಾವತಿಸಿದ ಬಗ್ಗೆ ದಾಖಲಾತಿ ವಿವರ ಸಹಿತ ದಾಖಲೆಯನ್ನು ಅರ್ಜಿಗೆ ಲಗತ್ತಿಸತಕ್ಕದ್ದು.


-:ಸೂಚನೆಗಳು:-

1)   ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರಿಜ್ಞಾನ ಅತ್ಯವಶ್ಯಕವಾಗಿರುತ್ತದೆ.
2)  ಅರ್ಜಿದಾರರು ಪ್ರತಿಯೊಂದು ಧಾಖಲಾತಿಗಳನ್ನು ಪತ್ರಾಂಕಿತ (ಗೆಜೆಟೆಡ್‍ಅಧಿಕಾರಿ) ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
3)  ಅರ್ಜಿದಾರರು ತಪ್ಪು ಮಾಹಿತಿ ನೀಡಿದ್ದಲ್ಲಿ ಅಥವಾ ಸಮರ್ಪಕ ಮಾಹಿತಿ ನೀಡದಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತವಾಗುತ್ತವೆ.
4)  ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ಪ್ರವರ್ಗ-1/ಮಾಜಿ ಸೈನಿಕ ವರ್ಗ/ಹಿಂದುಳಿದ ವರ್ಗದ ಹಾಗೂ ಇನ್ನಿತರೆ ಮೀಸಲಾತಿ ಸೌಲಭ್ಯ ಪಡೆಯಲು     ಇಚ್ಛಿಸುವವರು, ಸರ್ಕಾರ ನಿಗದಿಪಡಿಸಿದ ನಮೂನೆಯಲ್ಲಿ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪತ್ರ ಪಡೆದು ಅದರ ಪ್ರತಿಯನ್ನು ಪತ್ರಾಂಕಿತ      (ಗೆಜೆಟೆಡ್‍ಅಧಿಕಾರಿ) ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
5)  ಆಂತರಿಕ ಲೆಕ್ಕ ಪರಿಶೋಧಕರು/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮತ್ತು ಸಿವಿಲ್ ಇಂಜಿನಿಯರ್ ಹುದ್ದೆಗೆ     ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್ ಸೇರಿದಂತೆ ಬಿಇ [ಸಿವಿಲ್] ಪದವಿ ಹೊಂದಿದ ಅಭ್ಯರ್ಥಿಗಳು ಪದವಿಯ     ಎಲ್ಲಾ ವರ್ಷಗಳ/ಸೆಮಿಸ್ಟರ್ ಅಂಕಪಟ್ಟಿಗಳ ಪ್ರತಿಗಳನ್ನು ಪತ್ರಾಂಕಿತ (ಗೆಜೆಟೆಡ್‍ಅಧಿಕಾರಿ) ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
6)  ಜನ್ಮ ದಿನಾಂಕದ ದೃಢಿಕರಣಕ್ಕಾಗಿ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ ಶಾಲಾ ವರ್ಗಾವಣೆ ಪ್ರಮಾಣ ಪತ್ರ ಅಥವಾ ಕ್ಯುಮ್ಯೂಲೇಟಿವ್ ರೆಕಾರ್ಡ್ ಅದರ     ಪ್ರತಿಯನ್ನು ಪತ್ರಾಂಕಿತ (ಗೆಜೆಟೆಡ್‍ಅಧಿಕಾರಿ) ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
7)  ಅಭ್ಯರ್ಥಿಗಳು ಈಗಾಗಲೇ ಯಾವುದಾದರೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಅಂತಹ ಸಂಸ್ಥೆಯ ಮುಖ್ಯಸ್ಥರ ಅನುಮತಿ ಪತ್ರದ ಪ್ರತಿಯನ್ನು     ಸಲ್ಲಿಸಬೇಕು.
8)  ಅಭ್ಯರ್ಥಿಗಳು ಆಂತರಿಕ ಲೆಕ್ಕ ಪರಿಶೋಧಕರು/ ದ್ವಿತೀಯ ದರ್ಜೆ ಸಹಾಯಕರ/ಸಿವಿಲ್ ಇಂಜಿನಿಯರ್/ಸೆಕ್ಯುರಿಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ     ಸಲ್ಲಿಸಲು ಇಚ್ಛಿಸಿದಲ್ಲಿ ಆಯಾ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಮತ್ತು ನಿಗದಿತ ಶುಲ್ಕವನ್ನು ಪಾವತಿಸತಕ್ಕದ್ದು.
9)  ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣವನ್ನು ನೀಡದೇ ಮುಂದೂಡುವ, ರದ್ದುಗೊಳಿಸುವ ಮತ್ತು     ನಿಬಂಧನೆಗಳನ್ನು ಬದಲಾಯಿಸುವ ಅಧಿಕಾರವನ್ನು ನೇಮಕಾತಿ ಸಮಿತಿ ಹೊಂದಿರುತ್ತದೆ.
10)  ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ/ಸಂದರ್ಶನಕ್ಕೆ ಹಾಜರಾಗಲು ದಿನಾಂಕ, ಸ್ಥಳ ಮತ್ತು ಇತ್ಯಾದಿಗಳ ಮಾಹಿತಿಯನ್ನು ಎಸ್‍ಎಂಎಸ್ ಅಥವಾ     ಈಮೇಲ್ ಅಥವಾ ಪತ್ರದ ಮೂಲಕ ಕಳುಹಿಸಲಾಗುವುದು. ಮತ್ತು ಸಂಘದ ವೆಬ್‍ಸೈಟ್‍ನಲ್ಲಿ ತಿಳಿಸಲಾಗುವುದು.
11)  ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷ ಅವಧಿಯ ಪರೀಕ್ಷಾರ್ಹ(ಪ್ರೋಬೇಷನರಿ) ಸೇವೆಯಲ್ಲಿರಬೇಕಾಗುತ್ತದೆ.
12)  ಆಯ್ಕೆಗೊಂಡ ಅಭ್ಯರ್ಥಿಗಳು ಸಂಘದಿಂದ ಸೂಚಿಸಲ್ಪಟ್ಟಂತೆ ಭದ್ರತಾ ಠೇವಣಿ ಹಾಗೂ ವೈಯುಕ್ತಿಕ ಭದ್ರತೆ ನೀಡಬೇಕಾಗುತ್ತದೆ.
13)  ನೇಮಕ ಮಾಡಿಕೊಳ್ಳಲ್ಲಿರುವ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆಯು, ಕನ್ನಡ ಭಾಷೆ 50 ಅಂಕಗಳು, ಸಾಮಾನ್ಯ ಆಂಗ್ಲಭಾಷೆ 25, ಸಾಮಾನ್ಯ     ಪರಿಜ್ಞಾನ 25, ಭಾರತ ಸಂವಿಧಾನ 25, ಸಹಕಾರ 50 ಅಂಕಗಳು ಮತ್ತು ಸಂಘದ ಉದ್ದೇಶ ಚಟುವಟಿಕೆಗಳಿಗೆ ಪ್ರಸ್ತುತವಾದ ವಿಷಯ 25 ಅಂಕಗಳನ್ನು     ಒಳಗೊಂಡಂತೆ 200 ಅಂಕಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ.

HEAD OFFICE ADDRESS


The Managing Director TUMCOS Ltd.,
APMC Yard, Channagiri (T),
Davanagere (D) Pin : 577213
Phone : 08189-228003 / 227051
Email : tumcoscng@gmail.comಸದಸ್ಯರು
ಸಿಬ್ಬಂದಿ ನೇಮಕಾತಿ ಸಮಿತಿ
ತುಮ್‍ಕೋಸ್ ಚನ್ನಗಿರಿ.
ಹಾಗೂ
ಸಹಕಾರ ಸಂಘಗಳ ಉಪ ನಿಬಂಧಕರು
ದಾವಣಗೆರೆ ಜಿಲ್ಲೆ ದಾವಣಗೆರೆ.
ಸದಸ್ಯರು
ಸಿಬ್ಬಂದಿ ನೇಮಕಾತಿ ಸಮಿತಿ
ತುಮ್‍ಕೋಸ್ ಚನ್ನಗಿರಿ.
ಹಾಗೂ
ಆಡಳಿತ ಮಂಡಲಿ ನಿರ್ದೇಶಕರು
ತುಮ್‍ಕೋಸ್ ಲಿ., ಚನ್ನಗಿರಿ
ಅಧ್ಯಕ್ಷರು
ಸಿಬ್ಬಂದಿ ನೇಮಕಾತಿ ಸಮಿತಿ
ತುಮ್‍ಕೋಸ್ ಚನ್ನಗಿರಿ.
ಹಾಗೂ
ಅಧ್ಯಕ್ಷರು
ತುಮ್‍ಕೋಸ್ ಲಿ., ಚನ್ನಗಿರಿ
ಸದಸ್ಯರು
ಸಿಬ್ಬಂದಿ ನೇಮಕಾತಿ ಸಮಿತಿ
ತುಮ್‍ಕೋಸ್ ಚನ್ನಗಿರಿ.
ಹಾಗೂ
ಪರಿಣಿತರು ಮತ್ತು
ನಿವೃತ ಸಹಕಾರ ಸಂಘಗಳ ಸಹಾಯಕ ನಿಬಂಧಕರು
(ಮಧು ಎನ್ ಪಿ)
ಸದಸ್ಯ ಕಾರ್ಯದರ್ಶಿಗಳು ಸಿಬ್ಬಂದಿ ನೇಮಕಾತಿ ಸಮಿತಿ
ತುಮ್‍ಕೋಸ್ ಚನ್ನಗಿರಿ.
ಹಾಗೂ
ವ್ಯವಸ್ಥಾಪಕ ನಿರ್ದೇಶಕರು
ತುಮ್‍ಕೋಸ್ ಲಿ., ಚನ್ನಗಿರಿ